ಸಾವಿರದಗೌರಿಯಾದೆ

ಭರವಸೆಯ ಗುರುವಾದೆ
ಪ್ರೀತಿತೋರುವ ಗೆಳತಿಯಾದೆ
ಬೇರೆಲ್ಲೂ ಹುಡುಕದೆಯೇ
ನನ್ನಲಿಯೇ ನಿನ್ನ ಹುಡುಕುವಷ್ಟು
ಧೈತ್ಯ ಆಲವಾದೇ

ಬೆತ್ತಲೆಯ ಜಗತ್ತಿಗೆ
ವಿದ್ವತ್ ಹೇಳುವ
ಶಿಕ್ಷಕಿಯಾಗಿದ್ದೆ
ಕಂಡದ್ದನ್ನು ಕಂಡಹಾಗೆ
ಬರೆದು ಓದಿಸಿದೆ
ಚಿನ್ಹೆ, ಅಲಂಕಾರಗಳಿಲ್ಲದ
ನೇರ ನುಡಿಯಾಗಿದ್ದೆ

ಆದರೂ,
ಗುಂಡಿನ ಗುರಿ ತಪ್ಪಲಿಲ್ಲ
ಕಲಬುರ್ಗಿ ಮೇಷ್ಟ್ರು
ಎದೆಯೊಳಗಿರುವ ಗುಂಡು
ತಡವಿಲ್ಲದೆಯೇ
ನಿನ್ನನ್ನು ಹುಡುಕಿತು

ಪ್ರೀತಿಯನ್ನು ಪ್ರೀತಿಸಿದೆ
ದ್ವೇಷವನ್ನೂ ಪ್ರೀತಿಸಿದೆ
ಅಕ್ಕರೆಯ ಅಮ್ಮನಾದೆ,
ಗುರುವಾದೆ,
ಭರವಸೆಯಾದೆ, ಸಾಧ್ಯತೆಯಾದೆ,
ಸಂಕೇತವಾದೆ, ವನಿತೆಯಾದೆ,
ಅಮರಳಾದೆ,
ಸಾವಿರದ ಗೌರಿಯಾದೆ
ಸಾವಿರಾರು ಗೌರಿಯರಾದೆ

-ಮನೋಜ್ ಆರ್ ಕಂಬಳಿ
-ಮನೋಜ್ ಆರ್ ಕಂಬಳಿ

ಯುವ ಬರಹಗಾರರು, ಶಿವಮೊಗ್ಗ