ನೀನೇ ನನ್ನ ಗುರುತು…

ಹೇಗಿರಲಿ ನಿನ್ನ ವರತು…
ನೀನೇ ನನ್ನ ಗುರುತು…
ಪ್ರತಿಕ್ಷಣ ನಿನ್ನ ಕುರಿತು…
ಜಪಿಸುವೆ ನಾ ಜಗವ ಮರೆತು…
ನೀನೇ ನನ್ನ ಆದರ್ಶ
ನೀನೇ ನನ್ನ ಆಕರ್ಷಣೆ
ನೀನೇ ನನ್ನ ಸ್ಪೂರ್ತಿ
ನೀನೇ ನನ್ನ ಶಕ್ತಿ
ಏನೆಂದು ಹೇಳಲಿ ನನಗಾಗುವ ವೇದನೆಯಾ…
ಏನೆಂದು ವರ್ಣಿಸಲಿ ನಿನ್ನ ರೂಪವ ತಾಳಿದ ಕಲ್ಪನೆಯಾ…
ಅವನೆಂದರೆ ನನ್ನೆಲ್ಲಾ ನೋವಲ್ಲೂ ನಲಿವಾಗಿ ನಿಂತವನು…
ಜೀವಕೀಗ ಒಂದೇ ಹಂಬಲ ಪ್ರೀತಿಯನ್ನೇ ನಾನು ನಂಬಲಾ
ಕನಸುಗಳ ರಾಶಿ ಹೊತ್ತು ನೆಮ್ಮದಿಯ ತೀರ ಸೇರಲು ಜನುಮಗಳೇ ಕಾಯುವೇ ಗೆಳೆಯ…

ದಿವ್ಯಶ್ರೀ.ಎನ್
ದಿವ್ಯಶ್ರೀ.ಎನ್

ಮೇಳೆಕೋಟೆ, ತುಮಕೂರು.