ಹಸಿರ ಕಡಲು

ಹಸಿರ ಮನಕೆ ಊರೇ ಕಾಣ್ಪುದು
ಹಸಿರು ಚಂದದಾ ಮನೆ
ದಡವೇ ಕಾಣದ ಹಸುರ ಕಡಲಲಿ
ಹುಡುಕಲಾರೆನು ನಾ ಕೊನೆ

ತಂಪು ಗಾಳಿಗೆ ತೂಗುತ್ತಿರುವ ಹಸಿರು ಅಂಗಳದಾ ತೆನೆ
ಮೈಯ್ಯ ತುಂಬಾ ಹಸಿರು ತುಂಬಿದ ಎಳೆಯ ಬಾಳೆಯಾ ಗೊನೆ

ದಾನಧರ್ಮದ ಕಲ್ಪವೃಕ್ಷವು
ಜ್ಞಾನ ದೀಪದ ಬೋಧಿವೃಕ್ಷವು
ನಿತ್ಯಹರಿದ್ವರ್ಣದ ವನವು
ಇಲ್ಲಿ ಜನಿಸಿದ ಜೀವಿ ಧನ್ಯವು

ತುಳಸಿ ಬಿಲ್ವಾ ಗರಿಕೆ ತುಂಬಿದ ಗರ್ಭಗುಡಿಯ ದೇವರಸಿರು
ಹಲಸು ನೇರಳೆ ಮಾವು ಹೊಂದಿದ ಗಂಧದ ನಾಡು ಹಸಿರು

ಮಂಜುನಾಥ್ ಸಿ ಕೆಂಗಲ್ ಹಟ್ಟಿ
ಮಂಜುನಾಥ್ ಸಿ ಕೆಂಗಲ್ ಹಟ್ಟಿ

ವಿದ್ಯಾರ್ಥಿ, ಸಮಾಜಕಾರ್ಯ ವಿಭಾಗ
ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು.