ಮೌನ ನನ್ನೊಂದಿಗೆ ಬೆರೆಯಲಿ

ಮೌನ ನನ್ನೊಂದಿಗೆ ಬೆರೆಯಲಿ
ನನಗೆ ಮೌನದ ಜೊತೆ ಮಾತನಾಡುವ ಆಸೆ
ಆ ಮೌನದ ಜೊತೆ ಕಾಲ ಕಳೆಯುವ ಆಸೆ
ಆ ಮೌನವ ನಗಿಸೋ ಆಸೆ
ಆ ಮೌನವ ಅಪ್ಪಿಕೊಳ್ಳೋ ಆಸೆ

ಆ ಮೌನ ನನ್ನ ಖುಷಿ ಪಡಿಸುತ್ತೆ ಆದ್ರೆ
ಆ ಮೌನಕ್ಕೆ ಖುಷಿ ಪಡಿಸೋಕೆ ನನ್ನ ಮಾತ್ಗಳಿಗೂ ಅವಕಾಶ ಸಿಗ್ಲಿಲ್ಲ .
ಆ ಮೌನ ನನ್ನ ನೋವನ್ನು ಕೇಳುತ್ತೆ ಆದರೆ
ಆ ಮೌನದ ನೋವನ್ನ ಕೇಳೋಕೆ ನನ್ನ ಕಿವಿಗಳಿಗೂ ಅವಕಾಶ ಸಿಗ್ಲಿಲ್ಲ,
ಆ ಮೌನ ನನ್ನ ಕಣ್ಣೀರು ವರೆಸುತ್ತೆ
ಆ ಮೌನಕ್ಕೆ ಕಣ್ಣೀರು ಬಂದಾಗ ಕಣ್ಣೀರು ವರೆಸೋಕೆ ನನ್ನ ಕೈಗಳಿಗೂ ಅವಕಾಶ ಸಿಗ್ಲಿಲ್ಲ,

ಆ ಮೌನ ನನಗೆ ಸಂಕಟ ಆದಾಗ ಸಾಂತ್ವನ ಹೇಳ್ತಿತ್ತು
ಆ ಮೌನಕ್ಕೆ ಸಂಕಟ ಆದಾಗ ಈ ನನ್ನ ಎರೆಡು ತೋಳುಗಳಿಂದ ತಬ್ಬಿಕೊಂಡು ಸಾಂತ್ವನ ಹೇಳೋಕೆ
ನನ್ನ ತೋಳುಗಳಿಗೂ ಅವಕಾಶ ಸಿಗ್ಲಿಲ್ಲ.

ಆದ್ರೆ ಆ ಮೌನ ಮಾತ್ರ ಎಲ್ಲದನ್ನು ಸಾಂತ್ವನ ಮಾಡ್ತಾ ಇತ್ತು.
ನನಗೆ ತಿಳಿಯಲೇ ಇಲ್ಲಾ ಮೌನ ಮಾತನಾಡೋದಿಲ್ಲ
ಅದರ ಜೊತೆ ಕಾಲ ಕಳೆಯೋಕೆ ಆಗಲ್ಲಾ ಯಾಕಂದ್ರೆ ಮೌನದ ಜೊತೆ ಮಾತಾಡೋದು,
ಕಾಲ ಕಳೆಯೋದು ಎಲ್ಲವನ್ನೂ ಕಾಲ ನಿರ್ಧಾರ ಮಾಡಿರ್ಬೇಕು.
ಇಲ್ಲಾ………!
ನಮ್ಮನ್ನ ಆ ಮೌನ ಅವರಿಸಿಕೊಂಡಿರಬೇಕು
ಆವಾಗ್ಲೇ ಆ ಮೌನದ ಜೊತೆ ನಾನು ಬೇರೆಯೋಕಾಗೊದು.

ನಾಗಾರ್ಜುನ್  ಅಪ್ಪು
ನಾಗಾರ್ಜುನ್ ಅಪ್ಪು

ದಾವಣಗೆರೆ
ನಾಗಾರ್ಜುನ.ಎಂ.ವಿ ಅವರು ಮೂಲತಃ ದಾವಣಗೆರೆ ಜಿಲ್ಲೆಯವರಾಗಿದ್ದು, ಇವರು ಪತ್ರಕರ್ತರು ಮತ್ತು ಹವ್ಯಾಸಿ ಬರಹಗಾರರೂ ಸಹ ಹೌದು. ಸದ್ಯ ಬೆಂಗಳೂರಿನ ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದಾರೆ.

ಇದನ್ನೂ ಓದಿ : https://tenekannada.com/2022/04/bharatada-prajegalaada-naavu-we-the-people-of-india/