ಭಾರತದ ಪ್ರಜೆಗಳಾದ ನಾವು (We The People of india)

ಹಿರಿಯ ರಂಗಕರ್ಮಿಗಳು, ಸಾಹಿತಿಗಳಾದ ‘ರಾಜಪ್ಪ ದಳವಾಯಿ’ ಮೇಷ್ಟ್ರು ಅವರ ಹುಟ್ಟು ಹಬ್ಬದ ನಿಮಿತ್ತ ಅವರೇ ರಚಿಸಿರುವ “ಭಾರತದ ಪ್ರಜೆಗಳಾದ ನಾವು” (We the people of india) ನಾಟಕವನ್ನು ಲಕ್ಷ್ಮಣ.ಕೆ.ಪಿ ಅವರ ನಿರ್ದೇಶನದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಶಿವಮೊಗ್ಗ ರಂಗಾಯಣದಿಂದ ಪ್ರದರ್ಶಿಸಿದರು.

ಊರೂರು ಅಲೆಯುತ್ತಾ ಹಾಡುಗಳನ್ನು ಹಾಡುವ ಅಲೆಮಾರಿಗಳು ಪ್ರೇಕ್ಷಕರ ಮದ್ಯದಿಂದ ಹಾಡುತ್ತಾ ಇರುವಾಗ ಅವರಿಗೆ ಒಮ್ಜಿಂದೊಮ್ಮೆಲೆ ಸಂವಿಧಾನ ಎಂದರೇನು ಎಂದು ಹುಟ್ಟುವ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತಾ ಹೋಗುವುದರಿಂದ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಾಟಕ ಯಶಶ್ವಿಯಾಗಿದೆ.

ನಾಟಕದಲ್ಲಿ ಭಾರತದ ಸಂವಿಧಾನದಲ್ಲಿ ಪ್ರಮುಖವಾಗಿರುವ ಸ್ವಾತಂತ್ರ್ಯ, ಸಮತೆ, ಸೋದರತ್ವ ಭಾವನೆಯ ಕುರಿತು ಎಲ್ಲರಿಗೂ ಅರ್ಥವಾಗುವಂತೆ ತೋರಿಸಿದ್ದಾರೆ.

ಇಂದಿನ ದಿನಗಳಲ್ಲಿ ಮಾದ್ಯಮಗಳು ಹೇಗೆ ವರ್ತಿಸುತ್ತವೆ, ಮಾದ್ಯಮದ ಪ್ರತಿನಿಧಿ ಸಂವಿಧಾನ ಎಂದರೇನು? ಎಂದು ನಡೆಸುವ ಸಂದರ್ಶನದ ಪ್ರಶ್ನೆಗಳಿಗೆ ಸ್ವಾಮೀಜಿಗಳು ಹೇಗೆ ವರ್ತಿಸುತ್ತಾರೆ, ರಾಜಕಾರಣಿಗಳಿಗೆ ಇದೆ ಪ್ರಶ್ನೆಯನ್ನು ಕೇಳಿದರೆ ಅವರು ಇದು 30 ವರ್ಷದ ಹಿಂದಿನ ಪ್ರಶ್ನೆ, ಸಂವಿಧಾನ ಇರೋದೆ ಮೀಸಲಾತಿ ಇರೋರಿಗೆ ನಮ್ಮಂತ ಮೇಲ್ವರ್ಗದವರಿಗೆ ಅಲ್ಲಾ ಎನ್ನುತ್ತಾ ಲಂಚವನ್ನು ಕೊಟ್ಟಾಗ ಮಾದ್ಯಮದವರಲ್ಲಿ ಆಗುವ ದಿಡೀರ ಬದಲಾವಣೆ ಹೇಗಿರುತ್ತದೆ ಮತ್ತು ರಾಜಕಾರಣಿಗಳು ಆಗುವ ಅನಾಹುತಗಳಿಂದ ತಪ್ಪಿಸಿಕೊಳ್ಳಲು ಏನೆಲ್ಲಾ ಮಾಡುತ್ತಾರೆ ಎನ್ನುವುದು ಸುಲಭವಾಗಿ ವೀಕ್ಷಕರಿಗೆ ಅರ್ಥವಾಗುತ್ತದೆ.

ಭಾರತದ ಸಂವಿಧಾನವು ನೂರಾರು ಜಾತಿಯ, ನೂರಾರು ಜನರಿಗೆ ಮಾದರಿ ಆಗುವ ವಿಧಾನವಾಗಿದೆ, ಸಂವಿಧಾನ ಕರಡು ಸಮಿತಿಯ ಮೊದಲ ಸಭೆಯನ್ನು 1946 ಡಿಸೆಂಬರ್ 9ರಂದು ಸೇರಿದ್ದರು. ಸಂವಿಧಾನ ರಚನೆಯ ಸಮಯದಲ್ಲಿ 7635 ತಿದ್ದುಪಡಿಗಳನ್ನು ಮಾಡಿ 1949ರ ನವೆಂಬರ್ 26 ರಂದು ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರು ಸಂವಿಧಾನ ಕರುಡು ಪ್ರತಿಯನ್ನು ಸಭೆಗೆ ಸಲ್ಲಿಸಿದಾಗ, ಸಭೆಯು ಸಂವಿಧಾನವನ್ನು ಅಂಗೀಕರಿಸಿತು. ಸಂವಿಧಾನದಲ್ಲಿರುವ ಪ್ರಸ್ತಾವನೆಯು ತಳಪಾಯವಾಗಿದೆ. ಸಂವಿಧಾನ ಕಡರು ಸಮೀತಿಯಲ್ಲಿ 7 ಜನರಿದ್ದರು, ಅದರಲ್ಲಿ ಒಬ್ಬರು ರಾಜನಾಮೆ ನೀಡಿದರು, ಮತ್ತೊಬ್ಬರು ಅಮೇರಿಕಾಗೆ ಹೋದರು, ಮಗದೊಬ್ಬರು ರಾಜ್ಯಾಡಳಿತದಲ್ಲಿ, ಇನ್ನೂ ಮಿಕ್ಕುಳಿದವರಲ್ಲಿ ಒಬ್ಬರು ಮರಣ ಹೊಂದಿದರು, ಇಬ್ಬರು ದೆಹಲಿಗೆ ಹೋದವರು ಮರಳಿ ಬರಲೆ ಇಲ್ಲ, ಆದ್ದರಿಂದ ಅಂಬೇಡ್ಕರ್ ಅವರು ಒಬ್ಬರೆ ಕರುಡು ಪ್ರತಿಯನ್ನು ರಚಿಸಿದರು.

ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಕರುಡನ್ನು ಎಷ್ಟು ಶ್ರದ್ಧೆ ಮತ್ತು ಪ್ರೀತಿಯಿಂದ ರಚಿಸಿದ್ದರು ಎಂಬುದನ್ನು ಹತ್ತಿರದಿಂದ ವೀಕ್ಷಿಸಿದ ಸಮಿತಿಯ ಅಧ್ಯಕ್ಷರು ಹೇಳುತ್ತಾರೆ.

ಭಾರತದ ಪ್ರಜೆಗಳಾದ ನಾವು ಎಂದು ಪ್ರಾರಂಭವಾಗುವ ಸಂವಿಧಾನವು ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾಗಿ ತಲೆ ಎತ್ತಿ ನಿಂತಿದೆ. ಸ್ವಾತಂತ್ರ, ಸೋದರತ್ವ, ಸಮಾನತೆಯು ಸಂವಿಧಾನದ ಮುಖ್ಯ ಅಂಶಗಳು ಎಂದು ಅಂಬೇಡ್ಕರ್ ಅವರು ಸಭೆಯಲ್ಲಿ ಮಾತನಾಡುತ್ತಾ, ಜಾತಿ ಪದ್ದತಿಯು ದೇಶದ ನಿಜವಾದ ಧ್ವೇಶವಾಗಿದೆ ಎಂದು ಬೇಸರವನ್ನು ವ್ಯಕ್ತಪಡಿಸುತ್ತಾರೆ.

ಅಂಬೇಡ್ಕರ್ ಅವರು ಎಷ್ಟೊಂದು ಓದುವುದರಲ್ಲಿ ಮಗ್ನರಾಗುತ್ತಿದ್ದರೆಂದರೆ ಪುಸ್ತಕ ಒಂದಿದ್ದರೆ ಸಾಕು ಇವರಿಗೆ ಹೊತ್ತೊತ್ತಿಗೆ ಊಟ, ನಿದ್ರೆಯನ್ನೂ ಸಹ ಮಾಡುತ್ತಿರಲಿಲ್ಲವೆಂದು ತಿಳಿಸಿದ್ದಾರೆ.

ಅಂಬೇಡ್ಕರ್ ಅವರು ಕರುಡನ್ನು ರಚಿಸುವ ಸಂದರ್ಭದಲ್ಲಿ ನಿರಂತರ ಓದು, ಶ್ರಮ, ಅವಮಾನಗಳನ್ನೂ ಎದುರಿಸಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಭಾಷವಾರು ರಾಜ್ಯ ಸರಕಾರಗಳನ್ನು ಸ್ಥಾಪಿಸಬೇಕು.
ಸಾಮಾಜಿಕ ನ್ಯಾಯದ ಕೆಲವು ವಿಚಾರಗಳನ್ನು ನಾನು ಒಪ್ಪುವುದಿಲ್ಲ, ಧಾರ್ಮಿಕ ಅಲ್ಪಸಖ್ಯಾತರಿಗೆ ಮೀಸಲಾತಿ ಬೇಡ. ಹೀಗೆ ಇನ್ನೂ ಅನೇಕ ವಾದವಿವಾದಗಳು ಸಂವಿಧಾನ ರಚನೆಯಲ್ಲಿ ನಡೆದಿವೆ ಎಂಬುದನ್ನು ತಿಳಿದುಕೊಳ್ಳಲು ಜನರಿಗೆ ಸಹಾಯಕವಾಗಿರಬಹುದು.

ದೇಶದ ಸಂವಿಧಾನವು ಒಂದು ಜಾತಿ, ಲಿಂಗ ಮತ್ತು ಧರ್ಮಗಳಿಗೆ ಸಂಬಂಧಿಸಿದ್ದಲ್ಲ ಭಾರತದಲ್ಲಿರುವ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕುಗಳನ್ನು ಒಳಗೊಂಡಿದೆ. ಆದರೆ ದೇಶದ 80% ಹೆಣ್ಣುಗಳು ಜೀವನದಲ್ಲಿ ಒಮ್ಮೆಯಾದರೂ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ದಲಿತರ ಮೇಲೆ ಪದೆ ಪದೆ ಹಿಂಸೆ ಮತ್ತು ಅತ್ಯಾಚಾರಗಳು ನಡೆಯುತ್ತಿದ್ದು, ಧರ್ಮದ ಹೆಸರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ, ಎಲ್ಲೆಲ್ಲೂ ಅತ್ಯಾಚಾರಗಳು ನಡೆಯುತ್ತಿವೆ, ಜಾತಿ ಮುಖ್ಯ ಜಾತಿಯೇ ದೇವರು ಎನ್ನುವ ಮನಸ್ಥಿತಿಯ ಪುರುಷರು ನಮ್ಮ ಸಮಾಜದಲ್ಲಿದ್ದಾರೆ.

ವರದಕ್ಷಿಣೆ ನಿಷೇಧ ಕಾಯ್ದೆ, ಸ್ತ್ರೀ ಭ್ರೂಣ ಹತ್ಯೆಗಳು, ಬಾಲ್ಯ ವಿವಾಹ, PWD ಮಹಿಳಾ ಮೀಸಲಾತಿ, ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯ ಎಲ್ಲಾ ಕಾನೂನುಗಳು ಸಂವಿಧಾನದಲ್ಲಿದ್ದರೂ ಪುರುಷ ಪ್ರಧಾನ ವ್ಯವಸ್ಥೆಯಲ್ಲಿರುವ ಸಮಾಜವು ಹೆಣ್ಣನ್ನು ಕೀಳು ಎನ್ನುವಂತೆ ಯೋಚಿಸುತ್ತಿರುವ ಪ್ರಸ್ತುತತೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಮಹಿಳೆಯ ಮೇಲಿನ ದೌರ್ಜನ್ಯ ಮತ್ತು ಅತ್ಯಾಚಾರಗಳ ಕುರಿತು ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಸಮಾಜಕ್ಕೆ ಎಚ್ಚರಿಕೆಯನ್ನು ನೀಡಿದರು.

21ನೆಯ ಶತಮಾನದಲ್ಲಿರುವ ನಾವುಗಳು ಇಂದಿಗೂ ಲಿಂಗಗಳ ಬಗ್ಗೆ ಮಾತನಾಡಬೇಕಾದರೆ ಕೇವಲ ಗಂಡು ಮತ್ತು ಹೆಣ್ಣಿನ ಬಗ್ಗೆ ಮಾತನಾಡುತ್ತೇವೆ ಅದರಲ್ಲೂ ಹೆಣ್ಣನ್ನು ಆಟದ ವಸ್ತುವಿನಂತೆ ಕಾಣುವ ಪುರುಷ ಪ್ರಧಾನ ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು, ನಿರಾಶ್ರಿತರು, ಅಸ್ಪೃಶ್ಯರನ್ನು ಜನರು ಗೇಲಿ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ವೀಕ್ಷಕರ ಮುಂದಿಟ್ಟಿದ್ದಾರೆ.

2018ರ ಲೈಂಗಿಕ ಅಲ್ಪಸಂಖ್ಯಾತರ ಕಾಯ್ದೆಯ ಕುರಿತು ಜನರಲ್ಲಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.

ನಾಟಕದಲ್ಲಿ ಸಂವಿಧಾನದ ಅನುಚ್ಚೆದ 14, 15 ಮತ್ತು 21 ಮತ್ತು ಸಂವಿಧಾನವು ಇಲ್ಲಿಯ ಜನರಿಗೆ ನೀರು ನೆರಳು, ಸಮತೆ ಮತ್ತು ಮಮತೆ ಮೂಲ ತತ್ವ ಎನ್ನುವುದನ್ನು ನಾಟಕದ ಪ್ರದರ್ಶನದ ಮೂಲಕ ಜನರಲ್ಲಿ ಅರಿವು ಮೂಡಿಸಿತು.

ಪ್ರೇಕ್ಷಕರ ಮಧ್ಯದಿಂದ ನಾಟಕವನ್ನು ಪ್ರಾರಂಭಿಸಿ ಕೊನೆಗೆ ಪ್ರೇಕ್ಷಕರ ಮಧ್ಯದಲ್ಲಿಯೇ ನಾಟಕವನ್ನು ಮುಕ್ತಾಯಗೊಳಿಸುವುದರಿಂದ ಅಲೆಮಾರಿಗಳು ಎಂದು ಊರೂರು ತಿರುಗುತ್ತಾ ಹಾಡುವ ಜನತೆಗೆ ಪ್ರಾರಂಭದಲ್ಲಿ ಉದ್ಭವಿಸಿದ ಸಂವಿಧಾನ ಎಂದರೇನು ಎನ್ನುವ ಪ್ರಶ್ನೆಗೆ ಉತ್ತರವನ್ನು ತಿಳಿದುಕೊಂಡು ಮರಳಿ ತಮ್ಮ ಕಾಯಕವನ್ನು ಮಾಡಲು ಹೋರಡುವಾಗ ಸಂವಿಧಾನದ ಕುರಿತು ಹಾಡನ್ನು ಕಟ್ಟಿ ಸಂವಿಧಾನದ ಆಶಯಗಳನ್ನು ಒಳಗೊಂಡು ಕಿರು ಪುಸ್ತಕವನ್ನು ನೋಡುಗರಿಗೆ ಕೊಡುತ್ತಾ ನೋಡುಗರ ಮನವನ್ನು ಪ್ರಾರಂಭದಿಂದಲೂ ಹಿಡಿದುಕೊಂಡು ಒಂದು ಕ್ಷಣವೂ ಬೇರೆ ಕಡೆಗೆ ಗಮನ ಹರಿಸಿದಂತೆ ಪ್ರೇಕ್ಷಕರು ನಾಟಕವನ್ನು ನೋಡಿ ಸಂವಿಧಾನ ಮತ್ತು ಸಂವಿಧಾನ ರಚನಾ ಸಭೆಗಳಲ್ಲಿ ಏನೇನಾಯ್ತು ಎಂಬುದನ್ನು ತಿಳಿದುಕೊಳ್ಳಲು ನಾಟಕವು ಉಪಯುಕ್ತವಾಯಿತು.

ಸೋಮಶೇಖರ ಜಾಲಿಬೆಂಚಿ.
ಸೋಮಶೇಖರ ಜಾಲಿಬೆಂಚಿ.

ತಾಳಿಕೋಟಿ.
ಮೂಲತಃ ತಾಳಿಕೋಟೆಯವರಾದ ಇವರು ಹವ್ಯಾಸಿ ಪತ್ರಕರ್ತರು ಮತ್ತು ಬರಹಗಾರರು ಹೌದು. ಪ್ರಸ್ತುತ ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾರೆ.