ಬರಿ ನೆತ್ತರಿಲ್ಲ KGF ನ ಪೆನ್ನಲ್ಲಿ, ಸುತ್ತ ರಾಜಕೀಯದ ಗನ್ನೂ ಇದೆ.

KGF ಚಾಪ್ಟರ್ ಒಂದರ ನಂತರ ಚಾಪ್ಟರ್ ಎರಡಕ್ಕೆ ಸಿನಿ ಪ್ರಿಯರು ಕಾದು ಕುಳಿತಿದ್ದರು. ಯು ಟ್ಯೂಬ್ ನಲ್ಲಿ ಚಾಪ್ಟರ್ 2 ಟೀಸರ್ನ ಅತಿ ಹೆಚ್ಚು ವೀಕ್ಷಣೆ ಭಾರತ ಮತ್ತು ವಿಶ್ವದ ಗಮನ ಕನ್ನಡದ ಚಿತ್ರರಂಗದತ್ತ ಸೆಳೆದಿತ್ತು. KGF ಚಾಪ್ಟರ್ ಒನ್ ತಾಯಿಯ ಆಸೆಯನ್ನು ನೆರವೇರಿಸಲು ರಕ್ತ ಮಾರ್ಗ ಹಿಡಿದಿದ್ದ ನಾಯಕ ಬಾಸ್ ಆಗುವ ಗುರಿ ಏನು ಸಂದೇಶವನ್ನು ಕೊಡುತ್ತಿದೆ ಎನ್ನುವ ಪ್ರಶ್ನೆ ಮೂಡಿತ್ತು making wise no ಮಾತು ಅದ್ಭುತವಾದ creation ಅದು ಆದರೆ ಸಮಾಜಕ್ಕೆ ಹೇಳಲಾಗುತ್ತಿದ್ದ ಅಥವಾ ಕೊಡುತ್ತಿದ್ದ massage ನ ಬಗ್ಗೆ ವೈಯಕ್ತಿಕವಾಗಿ ನನಗೆ ಇಷ್ಟವಾಗಿರಲಿಲ್ಲ. ಒಂದರಲ್ಲಿ ಕಥೆ ಕೊನೆಗೊಳಿಸಿದ್ದರ ಕೂತೂಹಲ ಎರಡನೇ ಭಾಗವನ್ನು ನೋಡುವಂತೆ ಮಾಡಿದ್ದಂತೂ ನಿಜಾ.

ಗರುಡನ ಕೊಲೆ ಆಗಿತ್ತು ಅಧೀರ ಸತ್ತಿದ್ದ ಉಳಿದದ್ದು ವಿರಾಟ್ . ವಿರಾಟನೆ KGFನ ಒಡೆಯನಾಗುತ್ತಾನೆ ಎಂದು ಊಹಿಸಿಕೊಂಡಿದ್ದ ಕಥೆಯೊಳಗಿನವರು ಅಲ್ಲೊಬ್ಬ ಅದಾಗಲೆ KGFನ ಚಿನ್ನಕ್ಕೆ ಅರಸ ಎಂದು ಪಟ್ಟಾಭಿಷೇಕ ಮಾಡಿಕೊಂಡಿದ್ದಾನೆ ಎನ್ನುವುದು SHOCKING NEWS ಆಗುತ್ತದೆ. ಅಪ್ಪನ ನಂತರ ಮಗ, ಮಗನ ನಂತರ ಮೊಮ್ಮಗ ಹೀಗೆ ತಲೆಮಾರುಗಳಿಗೆ ಅಧಿಕಾರ ಮತ್ತೆ Celebrity ಪಟ್ಟ ಹಸ್ತಾಂತರಿಸಿಕೊಂಡು ಬಂದಿರುವ ಬರುತ್ತಿರುವ ನಾನಾ ಕ್ಷೇತ್ರಗಳಲ್ಲಿ nepotism ನ ಲಾಭ ಪಡೆದವರಿಗೆ ಮತ್ತು ಅದರ ಪೋಷಕರಿಗೆ ರಾಕಿಯ ‘ಬಡವರ ಮಕ್ಳನ್ನ ಬೆಳಿಯೋಕೆ ಬಿಡ್ರೋ’ ಎನ್ನುವ ಉದ್ದೇಶದಿಂದ ಹೊಡೆಯುವ dialogue nepotism ನ ವಿರುದ್ಧ ಹೆಣಗಾಡಿದವರ ಆಕ್ರೋಶದಂತೆ ವೀಕ್ಷಕರನ್ನು ತಲುಪುತ್ತದೆ. ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎನ್ನುವ ಗಾದೆ ಉಲ್ಲೇಖಿಸಿ ಹೇಳಿದ ಮಾತ್ಗಳಂತೂ Grid ಇದ್ದರಷ್ಟೇ ಉದ್ದಾರ ಎನ್ನುವುದನ್ನು ಹೇಳಲಾಗಿದೆ, ನಮ್ಮವರು “ಬಡವ ನೀ ಮಡ್ದಂಗಿರು” ಅಂತ ಹೇಳಿ ಹೇಳಿ
ಬಡವರು ಆಸೆಗಳನ್ನು ಇಟ್ಟುಕೊಳ್ಳುವುದೇ ಮಹಾಪರಾಧ ಎಂದು ನಂಬಿಸಲಾಗಿದೆ. ಸಿನಿಮಾಗಳು ಈ ರೀತಿಯ ಪ್ರಜ್ಞೆಯನ್ನು ಕೊಡುವ ಕೆಲಸ ಮಾಡಬೇಕಿದೆ. ಮನರಂಜನೆಯ ಜೊತೆಜೊತೆಗೆ KGF 2 ಕಟ್ಟಿ ಹಾಕುವ ಅನೇಕ ವಿಷಯಗಳನ್ನು ಹೊಡೆಯುತ್ತ ಹೋಗುತ್ತದೆ.

ಜಾಗ ವ್ಯಕ್ತಿಯ ಶಕ್ತಿಯನ್ನು ನಿರ್ಧರಿಸಲಾಗದು ವ್ಯಕ್ತಿಯ ಶಕ್ತಿ ಜಾಗದ ಪರಿಸರವನ್ನು ಬದಲಾಯಿಸಹುದು ಎನ್ನಲಾಗಿದೆ. ನಮ್ಮ ಹುಟ್ಟು ಶ್ರೇಷ್ಠತೆ ಅನಿಷ್ಟತೆಯನ್ನು ನಿರ್ಧರಿಸಲಾಗದು. ಒಂದು ಸ್ಥಳ ಧರ್ಮ ಜಾತಿ ಆಚರಣೆಗಳ ಮೇಲಿನ ಗಾಢ ಅಭಿಮಾನ ಇಂತಹ ಬಂಡ ನಿರ್ಧಾರಗಳಿಗೆ ಕಾರಣವಾಗುತ್ತದೆ. ಈ ಮನಸ್ಥಿತಿ ಎದುರಿನವರನ್ನು ನಮಗಿಂತ ಕೀಳು ಎಂದು ಭಾವಿಸಿಕೊಳ್ಳುತ್ತದೆ ಅದನ್ನೆ ವಾದಿಸುತ್ತದೆ.

ತಾಯಿಯ promiceನ ಬೆನ್ನಟ್ಟಿದವನು ವೈಯಕ್ತಿಕ ಬೆಳವಣಿಗೆಗಾಗಿ ರಕ್ತದೊಳೆಯಲಿ ರಕ್ತದೋಕುಳಿ ಆಡುತ್ತಿದ್ದಾನೆ ಎಂದು ಬಿಂಬಿಸಿಕೊಳ್ಳುತ್ತ ಹೋಗುವ ಕಥೆ ನಿಸ್ವಾರ್ಥ ಮತ್ತು ವ್ಯವಸ್ಥೆಯ ರಾಜಕೀಯ ಕಡೆಗಣನೆ ಹಾಗೂ ಸರಿ ಇಲ್ಲದ ಪರಿಸರದ ವಿರುದ್ಧ ಸಿಡಿದ ಧ್ವನಿ ಎಂದು ತಿಳಿಯುತ್ತದೆ. ವ್ಯವಸ್ಥೆಯ politics ನ ಅನ್ಯಾಯಗಳನ್ನು ಸಿನಿಮಾದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ. ಹೋರಾಟದ ಸ್ವರೂಪ ಬೇರೆಯಾದರು ನಮ್ಮದೆ ಕಥೆ ಎನಿಸಿಕೊಳ್ಳುತ್ತದೆ.
ಸಾಮ್ರಾಜ್ಯ ನೆತ್ತರು ಅಂಟಿದ ಇಟ್ಟಿಗೆಗಳಿಂದ ಕಟ್ಟಿದ್ದರು mines ನಲ್ಲಿನ ಶ್ರಮಿಕರಿಗಾಗಿ ದುಡಿಯುತ್ತಾನೆ ಹಾಳು ಕೊಂಪೆ ಬರಿ ಕಣ್ಣೀರು ಇದನ್ನೆಲ್ಲ ಸರಿಸಿ ಸರ್ಕಾರಗಳು ಮಾಡಲಾಗದ ಮಾಡಿರದ ಊರೊಂದನ್ನು ಕಟ್ಟಿ ಮೈನ್ಸ್ ನ್ನು business ಆಗಿ ದುಡಿಯುವವರನ್ನು ಗುಲಾಮಗಿರಿಯಿಂದ ಹೊರ ತಂದು ಕಾರ್ಮಿಕರನ್ನಾಗಿಸುತ್ತಾನೆ.

ರಮಿಕಾ ಸೇನ್ ಪಾತ್ರವಂತು rebel and roar. ನಡೆಯುತ್ತಿದ್ದದ್ದು ಒಳ್ಳೆಯದೇ ಆದರೂ ಮಾರ್ಗ ಕೆಟ್ಟದಿದ್ದರೆ ಪರಿಣಾಮ ಬೆರೆಯಾಗುತ್ತದೆ ಎಂದು ನಂಬಿದ್ದ ಪ್ರಾಮಾಣಿಕ ಪ್ರಧಾನ ಮಂತ್ರಿಯಾಕೆ. ಅಧೀರನ ಬದುಕಿದ್ದ ಅವನ ಧೈರ್ಯ ಮತ್ತು ಪಾತ್ರ ಡೈನಾಮಿಕ್ ಆದದ್ದು ಸಿನಿಮಾದ ಪ್ರತಿ ಪಾತ್ರಗಳು ಸಹ ಅಚ್ಚುಕಟ್ಟಾಗಿ special ಎನಿಸುವಂತೆ ನಟಿಸಿವೆ.

ನಮ್ಮಲ್ಲಾಗುವ ಅನೇಕ ಪರಿಣಾಮಕಾರಿ ಘಟನೆಗಳ ಹಿಂದೆ ರಾಜಕೀಯದ ಕೈವಾಡ ಇರುತ್ತದೆ ತಿಳಿದು ತಿಳಿಯದೆ ಅವನೇ lead ಮಾಡ್ತಿರ್ತಾನೆ ಎನ್ನುವ ಸತ್ಯವನ್ನ ಸ್ಪಷ್ಟವಾಗಿ ಹೇಳಲಾಗಿದೆ. ಕಥೆಯ ಹರಿವು ಒಳಗಿನ ಸಂಭಾಷಣೆ, counter, gesture ಎಲ್ಲದರಲ್ಲಿ ಕಥೆ ಜಯಿಸಿದೆ.

ಕಥೆ ಸೂಕ್ಷ್ಮತೆಗಳನ್ನು ಮತ್ತು ವ್ಯವಸ್ಥೆಯ ರಾಜಕೀಯವನ್ನು ಹೇಳುತ್ತಾ ಹೋದರು ಕೆಲ ಎಡವಟ್ಟುಗಳನ್ನು ಮಾಡಿದೆ.
ಸಿನಿಮಾದ ಮೊದಲ ಆರಂಭದಲ್ಲೆ ನಾಯಕ ನಟಿಯನ್ನ ‘ಇಟ್ಕೋತಿನಿ’ ಎನ್ನುವ ನಾಯಕ ನಟನ ಮಾತು ಹೆಣ್ಣು ಭೋಗದ ವಸ್ತುವಂತೆ ಪ್ರತಿಬಿಂಬಿಸಲಾಗಿದೆ. Entertainment ಬೇಕು ಅದ್ಕೆ ಇಟ್ಕೋತಿನಿ ಎನ್ನುವ dialogue ಬಂದಾಗ ವೀಕ್ಷಕರು ಶಿಳ್ಳೆ ಹೊಡೆದರು ಹೀಗಾಗಲೇ ಇರುವ ಕೆಳಮಟ್ಟದ ಆಲೋಚನೆಗೆ ನೀರುಣಿಸಿ ಬೆಳಿಸಿದಂತೆ ಆಯಿತು ಕಥೆಗಾರರು ಈ ಸೂಕ್ಷ್ಮತೆಗಳನ್ನು ಹೊಂದಿರಬೇಕು.
ಬಂದೂಕು ಒಂದರ ಹೆಸರು ದೊಡ್ಡಮ್ಮ ಆಗಿದ್ದು ದೊಡ್ಡಪ್ಪನಿಂದಲೇ ದೊಡ್ಡಮ್ಮಳಿಗೆ ಬೆಲೆ ಅಸ್ತಿತ್ವ ಎನ್ನುವುದನ್ನು ಹೇಳುತ್ತಾ hierarchy system ನ್ನು ಪೋಷಿಸಲಾಗಿದೆ. ಹೆಣ್ಣನ್ನು ಪೂಜಿಸಬೇಕು ಎಂದು ಹೇಳುವ ನಾಯಕ ನಟನ ಮಾತು ಗೌರವಿಸಿ ಮೂಲೆ ಸೇರಿಸಲು. ಮತ್ತೆ ತಾರತಮ್ಯಕ್ಕೆ ಒಳಪಡಿಸಲು provoke ಮಾಡಿದೆ. ಸಮಾಜದಲ್ಲಿ ಹೀಗಾಗಲೆ ನಂಬಿ ಪೋಷಿಸಿಕೊಂಡು ಬಂದಿರುವ ಅನೇಕ ಅನಿಷ್ಠತೆಗಳು ಇವೆ ನಾವು ಅದನ್ನು ತಡೆಯದಿದ್ದರೂ ಬೆಳೆಸದಂತೆ ನೋಡಿಕೊಳ್ಳಬೇಕು.

ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಕೊಟ್ಟ ಕಾಸಿಗೆ ಮೋಸವಿಲ್ಲ.

- ಮಹೇಶ . ಬಿ .ಕವಲ್ದಾರ್<br>ಯಾದಗಿರಿ
– ಮಹೇಶ . ಬಿ .ಕವಲ್ದಾರ್
ಯಾದಗಿರಿ

ಮೂಲತಃ ಯಾದಗಿರಿ ಜಿಲ್ಲೆಯವರಾದ ಇವರು ಯುವ ಬರಹಗಾರರೂ ಮತ್ತು ಕವಿಯು ಆಗಿದ್ದಾರೆ. ಕನ್ನಡಲ್ಲಿ ಗಜಲ್ ಗಳನ್ನು ಬರೆದು ಒಂದು ಪುಸ್ತಕವನ್ನು ಸಹ ಬಿಡುಗಡೆ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರಸ್ತುತ ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮದ ಪದವಿ ಪಡೆಯುತ್ತಿದ್ದಾರೆ.