ಹಳೆಯ ಕಲೆಗೆ ಹೊಸ ರೂಪ!

ಕುಂಬಾರಿಕೆ ವೃತ್ತಿಗೆ ಸುಮಾರು 3 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಪ್ರತಿ ಮನೆಯಲ್ಲೂ ಮಡಿಕೆಗಳು ಇದ್ದವು ಹಾಗು ಅಡುಗೆ ಸಮೇತ ಮಣ್ಣಿನ ಪಾತ್ರೆಯಲ್ಲಿ ಮಾಡಿ ತಿನ್ನುತ್ತಿದ್ದರು ಹಾಗು ನೀರು ಕೂಡ ಅತ್ಯಂತ ತಂಪಾಗಿದ್ದವು. ಬಡವರ ಪ್ರಿಡ್ಜ್ ಎಂದೇ ಖ್ಯಾತಿ ಪಡೆದಿರುವ ಕುಂಬಾರ ಮಾಡಿದ ಮಡಿಕೆ ಅದ್ಭುತ ಕಲಾಕೃತಿ. ಮಡಿಕೆಯಲ್ಲಿ ಶೇಖರಿಸಿರುವ ತಂಪು ನೀರು ಕುಡಿದರೆ ಅರೋಗ್ಯಕ್ಕೆ ಉತ್ತಮ ಎಂಬುವುದರಲ್ಲಿ ವೈಜ್ಞಾನಿಕ ಸತ್ಯ ಕೂಡ ಅಡಗಿದೆ. ಪ್ರಾಚಿನ ಕಾಲದಿಂದಲೂ ಪ್ರಚಲಿತದಲ್ಲಿರುವ ಕುಂಬಾರಿಕೆ ಕಸಬು ಬಹು ವೈಶಿಷ್ಟತೆಯ ಪ್ರಾಯೋಗಿಕ ಕಲೆ ಎಂದು ಹೇಳಬಹುದು.

21ನೇ ಶತಮಾನದಲ್ಲಿ ಜಾಗತೀಕರಣ ಪರಿಣಾಮವಾಗಿ ಅನೇಕ ವೃತ್ತಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ವೃತ್ತಿಯನ್ನೇ ಬದುಕಾಗಿಸಿಕೊಂಡ ಕುಂಬಾರ ಈಗ ತನ್ನ ಅಸ್ತಿತ್ವವನ್ನು ಕೆಳೆದುಕೊಳ್ಳುತ್ತಿದ್ದಾನೇ.
ಇಂದಿನ ಜನರು ವಿದ್ಯುತ್ ಬಳಕೆಯ ಯಂತ್ರೋಪಕರನಗಳ ಖರೀದಿಗೆ ಮುಗಿದುಬಿದ್ದಿದ್ದಾರೆ.ಮಣ್ಣಿನ ಮಡಿಕೆಗಳನ್ನು ಕೊಂಡುಕೊಳ್ಳದ ಜನರು ಪಿಂಗಾಣಿ ಸೇರಿದಂತೆ ಪ್ಲಾಸ್ಟಿಕ್, ಸ್ಟೀಲ್, ಬೆಳ್ಳಿ ಪಾತ್ರೆಗಳು ಖರೀದಿಸುತ್ತಿದ್ದಾರೆ. ಆದರೂ ಕೆಲವೊಂದು ಕುಂಬಾರದ ಕುಟುಂಬಗಳು ತಮ್ಮ ವೃತ್ತಿಯನ್ನು ಕೈ ಬಿಡದೆ ತಾವು ತಯಾರಿಸಿದ ಪ್ರತಿಯೊಂದು ವಸ್ತುಗಳಿಗೆ ಅದ್ಬುತ ಕಲೆ ಅಳವಡಿಸಿ ಅದಕ್ಕೆ ಬಣ್ಣ ಬಣ್ಣದ ಲೇಪನಗಳನ್ನು ಹಾಕಿ ಕುಂಭ ಕಲೆಯನ್ನು ಜೀವಂತವಾಗಿಸಿದ್ದಾರೆ .

ಕುಂಬಾರರು ಸಿದ್ದಪಡಿಸಿರುವ ಮಡಿಕೆಗಳಿಗೆ ವಿಶ್ವಾದ್ಯಂತ ಮನುಷ್ಯನ ಹುಟ್ಟಿವಿಂದ ಸಾಯುವರೆಗೂ ಪ್ರತಿಯೊಂದು ರೀತಿಯಲ್ಲಿ ಬಳಕೆಯಲ್ಲಿವೆ. ಸಾಮಾನ್ಯ ಬಡ ಜನರ ಗುಡಿಸಲಿನಿಂದ ಶ್ರೀಮಂತರ ಮನೆಗಳಲ್ಲಿ ಮಡಿಕೆಗಳು ಬಳಸುವುದು ನಾವು ನೋಡಿದ್ದೇವೆ. ಪ್ರತಿಯೊಬ್ಬರು ದಿನನಿತ್ಯ ಬದುಕಿನಲ್ಲಿ ಮಣ್ಣಿನ ವಿವಿಧ ಕಲಾಕೃತಿಗಳು ಉಪಯೋಗಿಸುತ್ತೇವೆ.
ಅದರ ವಿಶೇಷವಾಗಿ ಬಿಂದಿಗೆ, ಕೊಡ, ಗಡಿಗೆ, ಅಡಕಲು ಗಡಿಗೆ, ಹರವಿ (ಪಡಗ), ದೀಪ, ಜ್ಯೋತಿ, ದೋಸೆ ಹಂಚು, ಮುಚ್ಚಲ, ಹಣತೆ, ಐರಾಣಿ, ಕುಂಭ, ಗಣಪತಿ, ವಿವಿಧ ಕಲಾಕೃತಿಗಳನ್ನು ಕುಂಬಾರ ತನ್ನ ಅದ್ಬುತ ಕೈ ಚಲಕದಿಂದ ಕಾಲಕ್ಕೆ ತಕ್ಕಂತೆ ಹೊಸ ಹೊಸ ಕಲಾಕೃತಿ ಗಳಿಗೆ ಜೀವ ಕೊಡುತ್ತಾನೇ. ಹಲವು ವಿಧವಾದ ರೂಪಗಳಲ್ಲಿ ಅಕೃತಿಗಳನ್ನು ತಯ್ಯಾರಿಸುವ ಕುಂಬಾರರ ಕಲೆಯು ಒಂದು ಸಂಶೋಧನಾತ್ಮಕವಾದ ಕಲೆ ಎಂದು ಕರಿಯಬಹುದು.

ಪ್ರಾಚೀನ ಪರಂಪರೆ, ಸಂಕೃತಿ, ಕಲೆ, ಕಸುಬುಗಳಿಗೆ ಗುಡ್ ಬೈ ಹೇಳಿ ಯುಜ್ ಅಂಡ್ ಥ್ರೋ ವ್ಯವಸ್ಥೆ ರೂಡಿಸಿಕೊಂಡಿದ್ದೇವೆ. ಇದರಿಂದ ಹಳೇ ಸಂಸ್ಕೃತಿ ಜೊತೆಗೆ ನಮ್ಮ ಅರೋಗ್ಯವನ್ನು ಆಳುಮಾಡಿಕೊಂಡಿದ್ದೇವೆ.

ಒಂದು ಆಶಾದಾಯಿಕ ವಿಷಯವೆಂದರೆ ಕುಂಭ ಕಲೆ ಮತ್ತೊಂದು ರೂಪ ಪಡೆದು ಜಗತ್ತಿದೆ ಪರಿಚಯವಾಗುತ್ತಿದೆ ಹೊಸ ಹೊಸ ವಿನ್ಯಾಸದೊಂದಿಗೆ ಹಾಗು ಬಣ್ಣ ಬಣ್ಣದ ಲೇಪನಗಳೊಂದಿಗೆ ಹೊಸ ರೂಪ ಪಡೆದುಕೊಂಡ ಕುಂಬಾರಿಕೆ ಕಲೆ ಮತ್ತಷ್ಟು ಮುಂಚೂಣಿಗೆ ಬರಲಿ ಎಂದು ಆಶಿಸುತ್ತೇನೆ.

- ಆನಂದ ಕುಮಾರ್.ಆರ್
– ಆನಂದ ಕುಮಾರ್.ಆರ್

ಏತೂರಹಳ್ಳಿ